ಮಂಗಳೂರು-ಬೆಂಗಳೂರು ಮದ್ಯೆ ಚಲಿಸುವ ರೈಲಿಗೆ ಸದ್ಯದಲ್ಲೇ ವಿಸ್ಟಾಡೋಮ್ (ಗಾಜಿನ ಚಾವಣಿ) ಅಳವಡಿಸಲಾಗುವುದು. ಕಲೇಶಪುರ ಹಾಗೂ ಸುಬ್ರಹ್ಮಣ್ಯ ರೋಡ್ ನಿಲ್ದಾಣದ ವರೆಗಿನ ಸುಮಾರು 55 ಕಿ.ಮಿ ಉದ್ದದ ಹಚ್ಚ ಹಸಿರಿನ ಪ್ರಕೃತಿ ಸೌಂದರ್ಯ ಸವಿಯಬಹುದು.
ಹೈಲೈಟ್ಸ್:
🔹️ರೈಲಿನೊಳಗೆ 360 ಡಿಗ್ರಿಯಲ್ಲಿ ಸುತ್ತುವ ಕುರ್ಚಿಯಲ್ಲಿ ಕುಳಿತು ಶಿರಾಡಿ ಘಾಟಿಯ ಸೌಂದರ್ಯ ಸವಿಯಿರಿ
🔹️ಅರಣ್ಯ,...
more... ಜಲಪಾತ, ಸೇತುವೆಗಳ ಪ್ರಕೃತಿ ರಮಣೀಯ ನೋಟವನ್ನು ಪ್ರಯಾಣಿಕರು ಆಸ್ವಾದಿಸಬಹುದು
🔹️ಬೋಗಿಯಲ್ಲಿ ಜಿಪಿಎಸ್ ಆಧಾರಿತ ಮಾಹಿತಿ ವ್ಯವಸ್ಥೆ, ಮೈಕ್ರೋ ಓವೆನ್, ಸಣ್ಣ ಫ್ರಿಡ್ಜ್, ಎ.ಸಿ ಸೌಲಭ್ಯ
ಪ್ರಾಕೃತಿಕ ಸೌಂದರ್ಯದ ನಡುವೆ ಹಾದು ಹೋಗುವ ಬೆಂಗಳೂರು-ಮಂಗಳೂರು ರೈಲಿನ ಬೋಗಿಗೆ ಗಾಜಿನ ಚಾವಣಿ ಅಳವಡಿಸಲಾಗುತ್ತದೆ. ಆ ಮೂಲಕ ಪಶ್ಚಿಮ ಘಟ್ಟವನ್ನು ಸೀಳಿಕೊಂಡು ಹೋಗುವ ಈ ಮಾರ್ಗದಲ್ಲಿ ಸಂಚರಿಸುವವರಿಗೆ ಶಿರಾಡಿ ಘಾಟಿಯ ಸೌಂದರರ್ಯವನ್ನು ರೈಲಿನೊಳಗೆ ಕುಳಿತು ಸವಿಯುವ ಭಾಗ್ಯ ಸಿಗಲಿದೆ.
ಮಂಗಳೂರು-ಬೆಂಗಳೂರು ಮದ್ಯೆ ಚಲಿಸುವ ರೈಲಿಗೆ ಸದ್ಯದಲ್ಲೇ ವಿಸ್ಟಾಡೋಮ್ (ಗಾಜಿನ ಚಾವಣಿ) ಅಳವಡಿಸಲಾಗುವುದು ಎಂದು ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಸಂಸದ ಪಿ.ಸಿ ಮೋಹನ್ ಅವರು ಹೇಳಿದ್ದಾರೆ. ಈ ಬಗ್ಗೆ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.
ಕೊರೊನಾದಿಂದಾಗಿ ನಿಂತು ಹೋಗಿದ್ದ ರೈಲ್ವೇ ಸಂಚಾರ, ಇದೀಗ ನಿಯಮಿತವಾಗಿ ಆರಂಭವಾಗಿದ್ದು, ಏಪ್ರಿಲ್ ವೇಳೆಗೆ ಪೂರ್ಣ ಪ್ರಮಾಣದಲ್ಲಿ ಆರಂಭವಾಗುವ ನಿರೀಕ್ಷೆ ಇದೆ. ರೈಲ್ವೇ ಇಲಾಖೆಯಿಂದ ನೈಋತ್ವ ರೈಲ್ವೆಗೆ ಒಂದು ವಿಸ್ಟಾಡೋಮ್ ಎ.ಸಿ ಕೋಚ್ ಹಂಚಿಕೆ ಮಾಡಲಾಗಿದೆ. ಇದನ್ನು ಬೆಂಗಳೂರು ಹಾಗೂ ಮಂಗಳೂರು ನಡುವೆ ಸಂಚರಿಸುವ ರೈಲಿಗೆ ಅಳವಡಿಸಲಾಗುತ್ತದೆ.
ಈ ಬಗ್ಗೆ ಬುಧವಾರವೇ ಮಾತುಗಳು ಕೇಳಿ ಬಂದಿದ್ದರೂ, ಯಾವುದೇ ಖಚಿತತೆ ಇರಲಿಲ್ಲ. ಈಗ ಖುದ್ದು ಸಂಸದರೇ ಮಾಹಿತಿ ನೀಡಿದ್ದು, ಇನ್ನು ಕೆಲವೇ ದಿನಗಳಲ್ಲಿ ವಿಸ್ಟಾಡೋಮ್ ಬೋಗಿಯನ್ನು ಅಳವಡಿಸಲಾಗುತ್ತದೆ.
ಈ ಬೋಗಿ ಆಳವಡಿಸಿದ್ದೇ ಆದಲ್ಲಿ, ಸಕಲೇಶಪುರ ಹಾಗೂ ಸುಬ್ರಹ್ಮಣ್ಯ ರೋಡ್ ನಿಲ್ದಾಣದ ವರೆಗಿನ ಸುಮಾರು 55 ಕಿ.ಮಿ ಉದ್ದದ ಹಚ್ಚ ಹಸಿರಿನಿಂದ ಕೂಡಿದ ಅರಣ್ಯ, ಜಲಪಾತ, ಸೇತುವೆಗಳ ಪ್ರಕೃತಿ ರಮಣೀಯ ನೋಟವನ್ನು ಪ್ರಯಾಣಿಕರು ಆಸ್ವಾದಿಸಬಹುದು.
ವಿಸ್ಟಾಡೋಮ್ ಕೋಚ್ ಅನ್ನು ಹಾಲಿ ಇರುವ ಎಂಜಿನ್ಗೆ ಅಳವಡಿಸಲಾಗುತ್ತದೆ. ಒಂದು ಬೋಗಿಯಲ್ಲಿ 40 ಒರಗಿಕೊಳ್ಳುವ ಆಸನಗಳಿದ್ದು, ಇವುಗಳು 360 ಡಿಗ್ರಿಯಲ್ಲಿ ಸುತ್ತುತ್ತವೆ. ಇದರಲ್ಲಿ ಜಿಪಿಎಸ್ ಆಧಾರಿತ ಮಾಹಿತಿ ವ್ಯವಸ್ಥೆ, ಮೈಕ್ರೋ ಓವೆನ್, ಸಣ್ಣ ಫ್ರಿಡ್ಜ್, ಎ.ಸಿ ಸೌಲಭ್ಯ ಇರಲಿದೆ.