ಪಂಚಗಂಗಾ ಎಕ್ಸ್ಪ್ರೆಸ್
ಉಡುಪಿಯ ಪಂಚಗಂಗಾವಳಿ ಹಾಗು ಉತ್ತರ ಕನ್ನಡದ ಗಂಗಾವಳಿಯ ಸಂಕ್ಷಿಪ್ತ ಸುಂದರ ರೂಪ.
ಪಂಚಗಂಗಾವಳಿ ತೀರದಲ್ಲೇ ಕರಾವಳಿಯ ಸುಪ್ರಸಿದ್ದ ತೀರ್ಥ ಕ್ಷೇತ್ರಗಳಿರುವುದು.
ವರಾಹಿ ಜಲವಿದ್ಯುತ್ ನೀಡುವ ವರಾಹಿ ಸೇರಿದಂತೆ ಸೌಪರ್ಣಿಕಾ, ಕೇದಕ,ಚಕ್ರಾ,ಕುಬ್ಜಾ ಎಂಬ ಐದು ನದಿಗಳು ಒಂದೆಡೆ ಸೇರಿ "ಪಂಚಗಂಗಾವಳಿ" ಎಂಬ ಭ್ರಹತ್ ನದಿಯಾಗಿ...
more... ಸಾಗರ ಸೇರುತ್ತವೆ .
ಉತ್ತರ ಕನ್ನಡದ ಗಂಗಾವಳಿ ಅಂಕೋಲಾ ಬಳಿ ಸಾಗರ ಸೇರುವ ಮೊದಲು ಮೀನುಗಾರಿಕೆ ,ಪ್ರವಾಸೊದ್ಯಮದ ತೊಟ್ಟಿಲಾಗಿ ಹರಿಯುತ್ತದೆ .
ಪಂಚಗಂಗಾವಳಿಯ ಪಂಚ
ಗಂಗಾವಳಿಯ ಗಂಗಾ
ಸೇರಿಸಿ,ಉಡುಪಿ ಉತ್ತರ ಕನ್ನಡದ ಎರಡೂನದಿಗಳ ರೂಪಕವಾಗಿ ಈ ಹೆಸರು ಹುಡಕಲಾಗಿದೆ.
ಎರಡೂ ಜಿಲ್ಕೆಯ ಗಂಗಾವಳಿ ಪಂಚಗಂಗಾವಳಿ ತೀರಗಳ ಗುರುತು ಈ ಹೆಸರು .
ಪುರಾಣಗಳಲ್ಲಿ, ಶಾಸನಗಳಲ್ಲಿ, ಸ್ವಾತಂತ್ರ್ಯ ಹೋರಾಟದ ದಾಖಲೆಗಳಲ್ಲಿ, ಪಂಚಗಂಗಾ ನದಿ ಸಮೂಹದ ಉದಾಹರಣೆ ಲಭ್ಯ .
ಈ ಎಲ್ಲಾ ನದಿ ದಂಡೆಗಳು ಕರಾವಳಿಯ ನಾಗರೀಕತೆಯ ತೊಟ್ಟಿಲುಗಳೂ ಹೌದು.